ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಾಲಯ
ಸಿಗಂದೂರು ಶ್ರೀ ಚೌಡಮ್ಮ ದೇವಾಲಯ ಟ್ರಸ್ಟ್ (ರಿ).
ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ||
ಶರಣ್ಯೇತ್ರಯಂಬಕೆ ದೇವಿ ಸಿಗಂದೂರೇಶ್ವರೀ ನಮೋಸ್ತುತೆ||
ಓಂ ಶ್ರೀ ಸಿಗಂದೂರೇಶ್ವರಿ ನಿತ್ಯ ಮಹಂ ನಮಾಮಿ
ಧರ್ಮದರ್ಶಿ ಶ್ರೀ ರಾಮಪ್ಪನವರು
ಶ್ರೀ ಸಿಗಂದೂರು ಚೌಡೇಶ್ವರಿ ದೇವಾಲಯವು ಒಂದು ಪವಿತ್ರ ಕ್ಷೇತ್ರವಾಗಿ ಬೆಳೆಯಲು ಧರ್ಮದರ್ಶಿಯವರಾದ ಹೊಳೆಕೊಪ್ಪದ ಶ್ರೀ ಎಸ್. ರಾಮಪ್ಪನವರು ಕಾರಣ. ಇವರು ಸಿಗಂದೂರೇಶ್ವರಿಯ ಸೇವೆ ಮಾಡುತ್ತಾ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಪರಹಿತದೊಳೆನ್ನ ಹಿತವ ಕಂಡವ ನೀತಂ ಎಂಬ ಏಕ ಬೀಜ ವಾಕ್ಯ ಇವರಿಗೆ ಅನ್ವಯಿಸುತ್ತದೆ. ಮೊದಲು ಸಿಗಂದೂರೇಶ್ವರಿ ದೇವಾಲಯವು ಸಾಮಾನ್ಯ ಗುಡಿಯಾಗಿತ್ತು, ಇಂದು ದೇವಾಲಯವು ಸರ್ವತೋಮುಖ ರೀತಿಯಲ್ಲಿ ಅಭಿವೃದ್ಧಿಯಾಗುತ್ತಿದ್ದು ಕಲ್ಯಾಣ ಮಂದಿರ, ವಸತಿ ನಿಲಯ, ಬೋಜನ ಕೊಠಡಿ, ಸ್ನಾನ ಗೃಹ ಇತ್ಯಾದಿ ಸೌಕರ್ಯಗಳನ್ನು ನಿರ್ಮಿಸಿದ್ದಾರೆ. ಶ್ರೀ ಕ್ಷೇತ್ರದ ಅಭಿವೃದ್ಧಿಯಲ್ಲಿ ಬಂದ ಅಡಚಣೆ, ಕಷ್ಟಗಳನ್ನು ಶ್ರೀ ದೇವಿಯ ಪ್ರೇರಣೆಯಂತೆ ವಿರೋದ ಪ್ರತಿಭಟನೆಯನ್ನು ದಿಟ್ಟ ತನದಿಂದ ಎದುರಿಸಿ ಶ್ರೀ ಕ್ಷೇತ್ರದ ಧರ್ಮ ದ್ವಜವನ್ನು ಅತೀ ಎತ್ತರಕ್ಕೆ ಹಾರುವಂತೆ ಮಾಡಿದವರು ಶ್ರೀ ರಾಮಪ್ಪನವರು.
ಇವರು ದೇವಿಯ ಆರಾಧನೆಯೊಂದಿಗೆ ದಿನವನ್ನು ಪ್ರಾರಂಬಿಸಿ ತಮ್ಮ ಕೊಠಡಿಯಲ್ಲಿ ಆಸೀನರಾಗಿರುತ್ತಾರೆ. ಕಷ್ಟ ಕಾರ್ಪಣ್ಯಗಳನ್ನು ಬಗೆಹರಿಸಿಕೊಳ್ಳಲು ಬರುವಂತ ಭಕ್ತಾದಿಗಳೊಂದಿಗೆ ಕೂತು ಸಮಾಲೋಚನೆಮಾಡುತ್ತಾರೆ. ಏನಾದರೊಂದು ಸಾಮಾನ್ಯನ ದೂರು ಇವರ ಸಮ್ಮುಖಕ್ಕೆ ಬರುತ್ತದೆ. ಇವರು ವಾದಿ ಪ್ರತಿವಾದಿಗಳನ್ನು ನಿಗದಿತ ದಿನದಂದು ಬರಲು ತಿಳಿಸುತ್ತಾರೆ. ಇಬ್ಬರಿಗೂ ಅನುಕೂಲ ವಾಗುವಂತೆ ಸಮಸ್ಯೆ ಬಗೆಹರಿಸುತ್ತಾರೆ. ಕಳೆದ 5 ವರ್ಷಗಳಲ್ಲಿ ಇಂತಹ 2000 ಕ್ಕೂ ಅಧಿಕ ಪ್ರಕರಣ ಬಗೆಹರಿಸಲಾಗಿದೆ. ಕೇಳಿದರೆ ನಾನೆಲ್ಲಿ ಎಲ್ಲವೂ ತಾಯಿ ಸಿಗಂದೂರೇಶ್ವರಿಯ ಅನುಗ್ರಹ ಎಂದು ನಸು ನಗುತ್ತಾರೆ.
Copyright © 2018 www.sigandureshwari.com All rights reserved.