ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಾಲಯ
ಸಿಗಂದೂರು ಶ್ರೀ ಚೌಡಮ್ಮ ದೇವಾಲಯ ಟ್ರಸ್ಟ್ (ರಿ).
ಸಿಗಂದೂರು
    ಶ್ರೀ ಚೌಡೇಶ್ವರಿ ದೇವಿ ದೇವಾಲಯವು ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಪ್ರಕೃತಿ ಸಂಪದ್ಭರಿತ ಸ್ಥಳವಾದ ಸಿಗಂದೂರಿನಲ್ಲಿದೆ. ಶ್ರೀ ದೇವಿ ಕ್ಷೇತ್ರಕ್ಕೆ 300 ವರ್ಷಗಳ ಇತಿಹಾಸವಿದೆ. ಸಾಗರ ಪಟ್ಟಣದಿಂದ 42 ಕಿ.ಮಿ. ದೂರದ ತುಂಬ್ರಿ ಎಂಬ ಊರಿನ ಹತ್ತಿರವೇ ಸಿಗಂದೂರು ಕ್ಷೇತ್ರವಿದೆ. ಈ ಚೌಡೇಶ್ವರಿ ಅಮ್ಮನವರನ್ನು ಸಿಗಂದೂರೇಶ್ವರಿ ಎಂದೂ ಕರೆಯುತ್ತಾರೆ.
    ಪ್ರತಿವರ್ಷ ಮಕರಸಂಕ್ರಾಂತಿಯಂದು ಅಂದರೆ ಜನವರಿ 14 ಮತ್ತು 15 ರಂದು ಸಿಗಂದೂರೇಶ್ವರಿಯ ಜಾತ್ರೆ ಅದ್ಧೂರಿಯಿಂದ ನಡೆಯುತ್ತದೆ.
ಕ್ಷೇತ್ರ ವಿಶೇಷ
    ಶ್ರೀ ಚೌಡಮ್ಮ ದೇವಿಯು ಕಳ್ಳರ ಭಯವನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದವಳಾಗಿದ್ದಾಳೆ. ಇಲ್ಲಿ ಹರಕೆ ಹೊತ್ತುಕೊಂಡಿರುವ ಭಕ್ತರು ಕಳ್ಳಕಾಕರ ಭಯವಿಲ್ಲದೆ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಹರಕೆ ಹೊತ್ತುಕೊಂಡಿರುವ ಭಕ್ತರ ಮನೆಯಲ್ಲಿ ಕಳ್ಳತನವಾದರೆ ಕಳ್ಳರನ್ನು ದೇವಿ ಭಯಂಕರವಾಗಿ ಶಿಕ್ಷಿಸುತ್ತಾಳೆ ಎಂಬ ಪ್ರತೀತಿ ಇದೆ. ಯಾವ ಕ್ಷೇತ್ರದಲ್ಲೂ ಇಲ್ಲದ ವಿಷೇಶತೆ ಶ್ರೀ ಸಿಗಂದೂರು ಕ್ಷೇತ್ರದಲ್ಲಿದೆ. ಕಳ್ಳರಿಂದ ತಮ್ಮ ರಕ್ಷಣೆ ಹಾಗೂ ಜಮೀನು, ತೋಟ, ಗದ್ದೆ, ಹೊಸ ಕಟ್ಟಡ ಗಳಲ್ಲಿ ವಸ್ತುಗಳ ರಕ್ಷಣೆ ಪಡೆಯಲು "ಶ್ರೀದೇವಿಯ ರಕ್ಷಣೆ ಇದೆ" ಎಂಬ ಬೋರ್ಡು ಕೊಡುವ ಪದ್ದತಿ ಇದೆ. ಈ ಬೋರ್ಡನ್ನು ಹಾಕಿದರೆ ಕಳ್ಳತನವಾಗುವುದಿಲ್ಲ ಎಂಬುದು ಪ್ರತೀತಿ. ಒಂದೊಮ್ಮೆ ಕಳ್ಳನಿಗೆ ಗೊತ್ತಾಗದೆ ಕದ್ದರೂ ಅವನಿಗೆ ತೊಂದರೆಯಾಗಿ ಕದ್ದ ಮಾಲನ್ನು ವಾಪಾಸು ತಂದಿಟ್ಟು ಹೋಗುವನು ಎಂಬುದು ಈ ದೇವಿಯ ಭಕ್ತರ ಅಚಲವಾದ ನಂಬಿಕೆ. ಆದುದರಿಂದ ಈ ಭಾಗದಲ್ಲಿ ಹೆಚ್ಚಿನ ಮನೆ, ಆಸ್ತಿಗಳಲ್ಲಿ ದೇವಿ ಶಿಕ್ಷಿಸುವ ಬಗ್ಗೆ ಬರೆದಿರುವ ಫಲಕಗಳನ್ನು ಹರಕೆ ಹೊತ್ತುಕೊಂಡಿರುವವರು ಹಾಕಿರುತ್ತಾರೆ. ಇದಕ್ಕೆ ಸಾಕಷ್ಟು ನಿದರ್ಶನಗಳು ಇಲ್ಲಿ ಇವೆ.
     ಕ್ಷೇತ್ರದ ಧರ್ಮದರ್ಶಿಯವರಾದ ಶ್ರೀ ರಾಮಪ್ಪನವರು ದೂರುದಾರರ ಸಮ್ಮುಖದಲ್ಲಿ ವ್ಯಾಜ್ಯಗಳನ್ನು ತ್ವರಿತಗತಿಯಲ್ಲಿ ದೇವಿಯ ಅನುಗ್ರಹದೊಂದಿಗೆ ಇತ್ಯಾರ್ಥ ಗೊಳಿಸುತ್ತಿರುವುದು ಈ ಕ್ಷೇತ್ರದ ವಿಶೇಷ.
    ಶ್ರೀ ಚೌಡೇಶ್ವರಿ ದೇವಿಯು ಉಗ್ರಸ್ವರೂಪದವಳಾಗಿದ್ದಳು. ವರದಳ್ಳೀಯ ಭಗವಾನ್ ಶ್ರೀ ಶ್ರೀಧರಸ್ವಾಮಿಗಳು ಒಮ್ಮೆ ಸಿಗಂದೂರಿಗೆ ಬೇಟಿ ನೀಡಿದ್ದರು, ಆಗ ಶ್ರೀ ಶ್ರೀಧರಸ್ವಾಮಿಗಳು ಉಗ್ರಸ್ವರೂಪದವಳಾಗಿದ್ದ ದೇವಿಯನ್ನು ಮೃದುಸ್ವಭಾವದಿಂದ ಭಕ್ತರಪೋಷಣೆಯಾಗಬೇಕೆಂದು ಪ್ರಾರ್ಥಿಸಲು ಒಪ್ಪಿದ ದೇವಿಯು ಅಂದಿನಿಂದ ಸೌಮ್ಯರೂಪಿಣಿಯಾದಳೆಂದು ಪ್ರತೀತಿ ಇದೆ.
    ದೇವಸ್ಥಾನದ ಬಲಭಾಗದಲ್ಲಿ ಭೂತದ ಕಟ್ಟೆ ಇದ್ದು ಅದರಲ್ಲಿ ಸ್ಥಾಪಿತಗೊಂಡ ವೀರಭದ್ರನು ಸಿಗಂದೂರನ್ನು ಕಾಯುತ್ತಾನೆ. 
    ದೇವಸ್ಥಾನದ ಎಡಭಾಗದಲ್ಲಿ ಶ್ರೀ ಶನೇಶ್ವರ ಹಾಗೂ ಶ್ರೀ ರಕ್ತೇಶ್ವರಿ ದೇವಾಲಯದಿದೆ.
    ಪ್ರಧಾನ ಅರ್ಚಕರಾಗಿ ಎಸ್.ಪಿ. ಶೇಷಗಿರಿ ಭಟ್ ದೇವಿಯ ಆರಾಧನೆಯಲ್ಲಿ ತೊಡಗಿದ್ದಾರೆ.
ಮಾರ್ಗ
    ಸಾಗರದಿಂದ ಆವಿನಹಳ್ಳಿ ದಾರಿಯಾಗಿ ಹೊಳೆಬಾಗಿಲುವರೆಗೆ ರಸ್ತೆಯಿದೆ. ಹೊಳೆಬಾಗಿಲಿನಲ್ಲಿ ಲಿಂಗನಮಕ್ಕಿ ಅಣೆಕಟ್ಟಿನ ಹಿನ್ನೀರು ಎದುರಾಗುತ್ತದೆ. ಇಲ್ಲಿ ಮುಂದೆ ಸೇತುವೆ ಇಲ್ಲ. ಲಾಂಚ್ ಬಳಸಿಕೊಂಡು ಹಿನ್ನೀರನ್ನು ದಾಟಬೇಕಾಗುತ್ತದೆ. ಈ ದಾರಿಯಾಗಿ ಬರುವ ಎಲ್ಲಾ ವಾಹನಗಳಿಗೂ ಈ ಲಾಂಚ್ ನ್ನು ಬಳಸುವುದು ಅನಿವಾರ್ಯ. ಹಿನ್ನೀರು ಸುಮಾರು 2 ಕಿ.ಮಿ. ಅಗಲವಿದೆ. ಲಾಂಚ್ ನಿಗದಿತ ಸಮಯಗಳಲ್ಲಿ ಮಾತ್ರ ಲಭ್ಯ. ಇನ್ನೊಂದು ದಡದಲ್ಲಿರುವ ಕಳಸವಳ್ಳಿಯಿಂದ ದೇವಸ್ಥಾನ ಸುಮಾರು 2 ಕಿ.ಮಿ. ದೂರದಲ್ಲಿದೆ.
    ಕೊಲ್ಲೂರು ಇಂದ ಬರುವವರು ನಾಗೋಡಿ ಘಟ್ಟವನ್ನು ಏರಿ ನಾಗೋಡಿಯಿಂದ ತುಮರಿ ಮಾರ್ಗವಾಗಿ ಸಿಗಂದೂರಿಗೆ ಬರಬಹುದು. ಇಲ್ಲಿ ಯಾವುದೇ ಹಿನ್ನೀರು ಸಿಗುವುದಿಲ್ಲ. ಕೊಲ್ಲೂರಿನಿಂದ ಸಿಗಂದೂರು ಸುಮಾರು 45 ಕಿ.ಮಿ. ದೂರವಿದೆ.
    ಸಾಗರ, ಶಿವಮೊಗ್ಗ ಮತ್ತು ಭಟ್ಕಳದಿಂದ ಸಿಗಂದೂರಿಗೆ ನೇರ ಬಸ್ ಸೌಲಭ್ಯವಿದೆ. ಹೆಚ್ಛಿನ ಬಸ್ಸುಗಳು ಇಲ್ಲದಿರುವುದರಿಂದ ಖಾಸಗಿ ವಾಹನ ಮಾಡಿಕೊಂಡು ಬರುವುದೊಳ್ಳೆಯದು.

ಓಂ ಶ್ರೀ ಸಿಗಂದೂರೇಶ್ವರಿ ನಿತ್ಯ ಮಹಂ ನಮಾಮಿ
ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ||
ಶರಣ್ಯೇತ್ರಯಂಬಕೆ ದೇವಿ ಸಿಗಂದೂರೇಶ್ವರೀ ನಮೋಸ್ತುತೆ||
Web: www.sigandureshwari.com              e-Mail: sigandurchoudamma@gmail.com               Phone: 08186 210522 / 210555                              English
ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಾಲಯದ
 ವೆಬ್ ಸೈಟ್  www.sigandureshwari.com  ಗೆ ಸ್ವಾಗತ. ಮಲೆನಾಡಿನ ಪ್ರಕೃತಿ ಸೌಂದರ್ಯಗಳಿಂದ ರಾರಾಜಿಸುತ್ತಿರುವ ಅಮ್ಮ ಚೌಡಮ್ಮನವರ ಶ್ರೀ ಕ್ಷೇತ್ರ ಸಿಗಂದೂರಿಗೆ ಬಂದು ದೇವಿ ದರ್ಶನ ಪಡೆದು ದೇವಿ ಕೃಪೆಗೆ ಪಾತ್ರರಾಗಿ ಸನ್ಮಂಗಳವನ್ನುಂಟುಮಾಡಿಕೊಳ್ಳಬೇಕಾಗಿ ವಿನಂತಿ.
ನಿಮಗಿದೋ ಸ್ವಾಗತ.
ದಿನ ನಿತ್ಯ ಪೂಜಾ ವೇಳೆ
ಬೆಳಿಗ್ಗೆ : 3.30 ರಿಂದ 7.00
ಬೆಳಿಗ್ಗೆ : 8.00 ರಿಂದ 2.30
ಸಂಜೆ  : 5.30 ರಿಂದ 7.30 
Copyright 2017 www.sigandureshwari.com All rights reserved.
ಧರ್ಮದರ್ಶಿ 
ಶ್ರೀ ರಾಮಪ್ಪನವರು
ಮಕರಸಂಕ್ರಾಂತಿಯಂದು ಅಂದರೆ ಜನವರಿ 14 ಮತ್ತು 15 ರಂದು ಸಿಗಂದೂರೇಶ್ವರಿಯ ಜಾತ್ರೆ ಅದ್ಧೂರಿಯಿಂದ ನಡೆಯುತ್ತದೆ.
 ಶ್ರೀ ದೇವಿಯ ಕಿರುಚಿತ್ರ
ಸಿಗಂದೂರಿನಿಂದ ಹೊರಡಲು ಬಸ್ಸ್ ಹಾಗೂ ಲಾಂಚ್ ಸಮಯ
ಹೊಳೆಬಾಗಿಲು (ಸಾಗರ)ದ ಕಡೆಗೆ ಲಾಂಚ್ ಸಮಯ
ಬೆಳಿಗ್ಗೆ 8-00, 9-15, 10-15, 11-30
ಮಧ್ಯಾಹ್ನ 1-30, 2-45
ಸಂಜೆ 4-00, 4-40, 5-30
ಬಸ್ಸಿನ ಸಮಯ
ಸಾಗರ
ಬೆಳಿಗ್ಗೆ 9-45, 11-15
ಮಧ್ಯಾಹ್ನ 1-15, 2-30, 3-45
ಶಿವಮೊಗ್ಗ
ಬೆಳಿಗ್ಗೆ 7-30, 8-30
ಮಧ್ಯಾಹ್ನ 2-45
ಭಟ್ಕಳ;
ಬೆಳಿಗ್ಗೆ 6-45
ಮಧ್ಯಾಹ್ನ 1-45
ಕೃಪೆ: ಮಾಹಿತಿ ಫಲಕ ಸಿಗಂದೂರು ದೇವಸ್ಥಾನ