ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಾಲಯ
ಸಿಗಂದೂರು ಶ್ರೀ ಚೌಡಮ್ಮ ದೇವಾಲಯ ಟ್ರಸ್ಟ್ (ರಿ).
ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ||
ಶರಣ್ಯೇತ್ರಯಂಬಕೆ ದೇವಿ ಸಿಗಂದೂರೇಶ್ವರೀ ನಮೋಸ್ತುತೆ||
ಓಂ ಶ್ರೀ ಸಿಗಂದೂರೇಶ್ವರಿ ನಿತ್ಯ ಮಹಂ ನಮಾಮಿ
ಧರ್ಮದರ್ಶಿ 
ಶ್ರೀ ರಾಮಪ್ಪನವರು
Web: www.sigandureshwari.com              e-Mail: sigandurchoudamma@gmail.com               Phone: 08186 210522 / 210555                              English
ಮಕರಸಂಕ್ರಮಣ ಜಾತ್ರಾ ವಿಶೇಷ.
     ಹಿಂದೂ ಧರ್ಮದ ಪರಂಪರೆಯಲ್ಲಿ ಮಕರ ಸಂಕ್ರಾಂತಿ ಹಬ್ಬವೂ ದಸರಾದಂತೆ ಒಂದು ವಿಶಿಷ್ಟ ಸ್ಥಾನ ಪಡೆದಿದೆ. ಈ ಹಬ್ಬವು ಋತುಮಾನಕ್ಕನುಸರಿಸಿ ಮೂರು ದಿನಗಳವರೆಗೆ ನಡೆಯುತ್ತಿದ್ದು, ಮೊದಲನೆ ದಿನವನ್ನು ಭೋಗಿ ಹಬ್ಬ, ಎರಡನೆ ದಿನವನ್ನು ಸಂಕ್ರಾಂತಿ, ಮೂರನೆ ದಿನವನ್ನು ಕುನುಮಾ ಎಂದು ಕರೆಯುವುದುಂಟು.
    ಆಯನಂ ವರ್ತ್ಯಮಾರ್ಗಸ್ವ ಎಂಬ ಅಮರಸಿಂಹನ ಉಕ್ತಿಯಂತೆ ಮಕರ ಸಂಕ್ರಾಂತಿಯೆಂದರೆ ಉತ್ತರಾಯಣ ಪುಣ್ಯ ಕಾಲ. ಈ ಮಕರ ಸಂಕ್ರಾಂತಿ ದಿನ ಸೂರ್ಯ ಉತ್ತರ ದಿಕ್ಕಿನ ಮಾರ್ಗಗತಿ ಯುಳ್ಳವನಾಗುವನು.
    ಪ್ರತಿವರ್ಷ ಮಕರಸಂಕ್ರಾಂತಿಯಂದು ಅಂದರೆ ಜನವರಿ 14 ಮತ್ತು 15 ರಂದು ಸಿಗಂದೂರೇಶ್ವರಿಯ ಜಾತ್ರೆ ಅದ್ಧೂರಿಯಿಂದ ನಡೆಯುತ್ತದೆ.
    ಮಕರಸಂಕ್ರಾಂತಿಯಂದು ಎಳ್ಳು ನೀರಿನಲ್ಲಿ ಸ್ನಾನ ಮಾಡಿಕೊಂಡು ಶ್ರೀ ದೇವಿಗೆ ಹಣ್ಣುಕಾಯಿ, ಹೂ, ಎಳ್ಳು ಬೆಲ್ಲವನ್ನು ಅರ್ಪಿಸಿ ಅದನ್ನು ಪ್ರಸಾದವೆಂದು ಸ್ವೀಕರಿಸುತ್ತಾರೆ.
    ಶರಾವತಿ ನದಿಯಲ್ಲಿ ಸ್ನಾನ ಮಾಡಿ ದೇವಿ ದರ್ಶನ ಪಡೆದು ಶ್ರೀ ಅಮ್ಮನವರ ಪ್ರಸಾದವಾದ ಎಳ್ಳು - ಬೆಲ್ಲ ಸ್ವೀಕರಿಸಿದವರ ಕುಟುಂಬವರ್ಗಕ್ಕೆ ದೀರ್ಘಾಯುರೋಗ್ಯದಿ ಸಕಲ ಸಂಪದಗಳು ಲಭಿಸಿ ತಮ್ಮ ಜೀವನ ಸುಖ ಶಾಂತಿ ಸಮೃದ್ಧಿಗಳಿಂದ ತುಂಬಿ ತುಳುಕುವುದೆಂದು ಶ್ರೀದೇವಿಯ ಅರ್ಚಕರು ನುಡಿಯುತ್ತಾರೆ.
    ಮಕರಸಂಕ್ರಮಣ ಜಾತ್ರಾ ಸಮಯದಲ್ಲಿ ಶ್ರೀ ದೇವಿ ಭಕ್ತರಿಗೆ ಪ್ರಸಾದ ವಿನಿಯೋಗ ವ್ಯವಸ್ಥೆ ಯನ್ನು ದೇವಸ್ಥಾನದ ವತಿಯಿಂದ ಏರ್ಪಡಿಸಿರುತ್ತಾರೆ.
Copyright 2017 www.sigandureshwari.com All rights reserved.