ಶ್ರೀ ಧನಾಂಜನೇಯ ಸ್ವಾಮಿ ದೇವಸ್ಥಾನ, ಹೊಳೆಕೊಪ್ಪ
ಸೊರಬ ತಾ. ಶಿವಮೊಗ್ಗ ಜಿಲ್ಲೆ. ಮೊ: 9449170712, ಫೊನ್:08186 210522,245088
    ಶ್ರೀ ಧನಾಂಜನೇಯ ಸ್ವಾಮಿ ದೇವಾಲಯವು ಸೊರಬ ತಾಲ್ಲೂಕಿನ ಹೊಳೆಕೊಪ್ಪ ಎಂಬ ಗ್ರಾಮದಲ್ಲಿದೆ. ಈ ಕ್ಷೇತ್ರವು ಸಾಗರದಿಂದ ಸೊರಬ ಮಾರ್ಗವಾಗಿ ಸುಮಾರು 13 ಕಿ.ಮಿ ದೂರದಲ್ಲಿದೆ. ದೇವಾಲಯವು ಪುರಾತನ ದೇವಾಲಯಗಳಲೊಂದಾಗಿದೆ.
    ಕ್ಷೇತ್ರ ವಿಶೇಷ : ಶ್ರೀ ಸ್ವಾಮಿಯ ಮಹಿಮೆ ಅಪಾರವಾಗಿದ್ದು ಶನಿ ದೋಷ ನಿವಾರಣೆಗೆ ಶ್ರೀ ಕ್ಷೇತ್ರವು ಅತ್ಯಂತ ಪ್ರಸಿದ್ಧವಾಗಿದೆ.
    ಶ್ರೀ ಸ್ವಾಮಿಯ ದೇವಾಲಯದ ಉಸ್ತುವಾರಿಯನ್ನು ಹೊಳೆಕೊಪ್ಪದ ಶ್ರೀ ರಾಮಪ್ಪನವರು ವಹಿಸಿಕೊಂಡು ಸಹೋದರ ಹಾಗೂ ಮಗನ ಸಹಕಾರದೊಂದಿಗೆ ಅತ್ಯಂತ ಅಭಿವೃದ್ಧಿಪಡಿಸಿದ್ದಾರೆ. ದೇವಾಲಯದಲ್ಲಿ ಸಭಾ ಭವನ, ಊಟದ ಮನೆ, ಅಥಿತಿ ಕೋಣೆ ಹಾಗೂ ಇತರೆ ಸೌಕರ್ಯಗಳನ್ನು ನಿರ್ಮಿಸಿದ್ದಾರೆ.
    ಶ್ರೀ ಸ್ವಾಮಿಯ ದೇವಾಲಯವು ಪುಟ್ಟ ಗ್ರಾಮದಲ್ಲಿದ್ದರೂ ತನ್ನ ಮಹಿಮೆಯಿಂದಾಗಿ ಅಪಾರ ಭಕ್ತಾಧಿಗಳನ್ನು ಹೊಂದಿದೆ. ದೂರದೂರುಗಳಿಂದಲೂ ಭಕ್ತರು ಆಗಮಿಸುತ್ತಾರೆ.
    ಇಲ್ಲಿ ಮದುವೆ ಹಾಗೂ ಮತ್ತಿತರ ಕಾರ್ಯಕ್ರಮಗಳನ್ನು ನಡೆಸಬಹುದಾಗಿರುವುದರಿಂದ ಪ್ರತಿನಿತ್ಯ ಏನಾದರೊಂದು ಕರ್ಯಕ್ರಮ ನಡೆಯುತ್ತಿರುತ್ತದೆ.
    ಕ್ಷೇತ್ರದ ಸಭಾ ಭವನವು ಅತ್ಯಂತ ವಿಶಾಲವಾಗಿದ್ದು ಸಾವಿರಕ್ಕೂ ಅಧಿಕ ಜನರು ಏಕ ಕಾಲದಲ್ಲಿ ಕೂರಬಹುದಾಗಿದೆ. ಊಟದ ಮನೆಯು ಸಹ ಅತ್ಯಂತ ವಿಶಾಲವಾಗಿದೆ, ಅಡಿಗೆ ಮಾಡಲು ಬೇಕಾದ ಎಲ್ಲಾ ರೀತಿಯ ವ್ಯವಸ್ಥೆ ಯನ್ನು ದೇವಾಲಯದ ವತಿಯಿಂದ ಒದಗಿಸಿಕೊಡಲಾಗುತ್ತದೆ.
    ಶ್ರೀ ಕ್ಷೇತ್ರ ಸಿಗಂದೂರಿನ ಧರ್ಮಧರ್ಶಿಯವರಾದ ಶ್ರೀ ರಾಮಪ್ಪನವರ ಅತೀವ ಕಾಳಜಿಯಿಂದಾಗಿ ಈ ಕ್ಷೇತ್ರವು ಅತ್ಯಂತ ಅಭಿವೃದ್ಧಿಗೊಳ್ಳುತ್ತಿದೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಸಹಕಾರವು ಅಪಾರವಾಗಿದೆ.
    ಅರ್ಚಕರು ಕ್ಷೇತ್ರದಲ್ಲಿಯೇ ವಾಸವಾಗಿರುವುದರಿಂದ ಸಮಯಕ್ಕೆ ಸರಿಯಾಗಿ ಶ್ರೀ ಸ್ವಾಮಿಗೆ ಪೂಜಾ ಕಾರ್ಯಗಳನ್ನು ನಡೆಸಲು ಅನುಕೂಲವಾಗಿದೆ.
    ಮದುವೆ ಹಾಗೂ ಇತರೆ ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಬೇಕಾದ ಎಲ್ಲಾ ರೀತಿಯ ಸೌಕರ್ಯಗಳು ಇಲ್ಲಿರುವುದರಿಂದ, ಯಾವುದಾದರೂ ಕಾರ್ಯಕ್ರಮ ನಡೆಸಲು ಇಚ್ಚಿಸುವವರು ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದಾಗಿದೆ.
ಶ್ರೀ ಧನಾಂಜನೇಯ ಸ್ವಾಮಿ ದೇವಾಲಯ.
ಹೊಳೆಕೊಪ್ಪ.
ಸೊರಬ ತಾ. 
ಶಿವಮೊಗ್ಗ ಜಿಲ್ಲೆ.
ಮೊ: 9449170712,
ಫೊನ್:08186 210522,245088
Designed by Imager Technologies, Shivamogga